ಆದಿತ್ಯಸೇನ
ಗುಪ್ತರಾಜವಂಶದ ಮಾಧವ ಗುಪ್ತನ ಮಗ. ಮಗಧದಲ್ಲಿದ್ದವ. ಹರ್ಷವರ್ಧನನ ಅನಂತರ ಗುಪ್ತ ರಾಜ್ಯವನ್ನು ಸ್ವತಂತ್ರವಾಗಿಸಿ ಪ್ರಮುಖ ರಾಜ್ಯವನ್ನಾಗಿಸಿದನಲ್ಲದೆ ಅಶ್ವಮೇಧಯಾಗವನ್ನೂ ಮಾಡಿದ. ಭೂತಲವನ್ನೆಲ್ಲ ಆಳಿದನೆಂದು ಹೇಳಿಕೊಂಡಿದ್ದಾನೆ.

(ಎಂ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ